SHORT STORY .... 4
. ಸಾನಿ ಕಾಣಿ
ವ್ಹರ್ಡಿಕೆ ಮಂಟವೇ ದುಕೂನ್ ಭಾರ್ ಸರ್ತಾನಾ ವ್ಹಕ್ಲೆಲೆ ಅಮ್ಮಾನ ಬುದ್ಧಿ
ಸಾಂಗ್ಲೆ ಅಧಿತಿ ಕ .. " ಖಂಚೇ ವಿಷಯಾನ ಆಮ್ಗೆಲೆ ವೈರಿ ಕೊಪ್ಲಾ ಮ್ಹಣ್ಕೆ ... ಬಾಮ್ ಣಾ
ವೈರಿ ಕೊಪ್ಪುನುಕ್ಕಾ ... ಉಲ್ಲೋಚೆ ಉತ್ತರಂ ಮೊವಾಳು
ಜಾವ್ನುಅಸ್ಸುಕಾ , ಚಂದ ರೀತ್ಯೇರಿ ಸಾಂಘ .. ಖುಷಿ ಅಸ್ಲೆರಿ ಅಯ್ಕಾತಾಲೊ ... ನಾತ್ಲೆರಿ .. ಐಕನಿ ಮೊಣು ವೊತ್ತಾಯ್
ನಕ್ಕಾ .' ತಾಳಿ ದವನು ಬಾಳಿಯಾನು ' ಮೋಣು ಗ್ಯಾದಿ ಅಸ್ಸ . ತುಗ್ಗೆಲ್ ಕಷ್ಠ ಗೀಳ್ನ್ ತೊಂಡಾರಿ
ಹಾಸು ಕೆದನಾಯ್ ಅಸ್ಸೊ ..... " ಗೌಜಿ ಮಧ್ಯೆ ಅಮ್ಮ ಕಸಲೆ ಉಲ್ಲಯಿತಾ ಮ್ಹಳ್ಳೆಲೆ ಕನ್ನಾ
ವೊಚ್ಚನಿ . ಕಾರ್ ದೊಗಾಕಾಯ್ ಘೇವ್ನ್ ಮುಕಾರಿ ಗೆಲ್ಲೆ . ಅಮ್ಮಾ ಕ ಯಚ್ಛನ .. ಸಂಘಕಾ ಝಾಲ್ಲೆಲೆ
ಸಂಘು ಜಾಯ್ನಿಮೂ ಮೋಣು .
ಸುರ್ವೆ ದಿವಸು ರಾತ್ರಿ ಬಮ್ಮಣಾನ ಸಾಂಗ್ಲೆ " ಅಮ್ಮಿ ಸುರ್ವೇಕ ಲಾಯಕ್
ದೋಸ್ತ ಜಾವ್ಯಾ ... ಬಮ್ಮಣ್ - ಬಾಯ್ಲ್ ಮಾಗಿರಿ ... ತುಕ್ಕ ನೀದ ಯೆತ್ತ ಝಲ್ಲೆರಿ ನಿದ್ದೆ ... ಹಾಂವ ಸಕಲ ನಿದ್ಧತಾ ! " ಅಸಲಿ ರಾತಿ
ಕಿತ್ಲಿ ಕೀ ಆಯಿಲಿ ... ಗೆಲ್ಲಿ ... ದಿವಸ ಗೆಲ್ಲೆ ... ವಾರು ಗೆಲ್ಲೋ ... ಮಹಿನೆ
ಗೆಲ್ಲೆ . ಅರುಣ ಅನಿ ಅದಿತಿ ಮಧ್ಯೆ ದೊಗ್ಗ ಜನಾಕ ಕಳ್ನಾ ನಾತ್ತಿಲೆ ದೂರಸಾಣಿ ಚಾಡ್ತಾ ಗೆಲ್ಲೆ .
ಅರುಣು ಕೆದನಾಯ್ ಅದಿತಿ ಲೆ ಚಂದ ತೊಂಡ ಪೊಳೊನ್ ಸಂತೋಷು
ಪಾವತಾಲೊ . ಅರುಣಾಕ ಮಿಗೆಲ್ ವೈರಿ ಕಿತ್ಲಿ ಪ್ರೀತಿ ಅಸ್ಸ ಪೊಳೆ ! ... ನಿಮಗಿಲೆಲೆ ಘೇವ್ನ್ ದಿತ್ತಲೊ .. ಸಿನಿಮಾ , ಪಾರ್ಕ ,
ಮಾಲ್ , ಬಾಜಾರ್ ಘು೦ವ್ನ್ ... ಐಸ್ ಕ್ರೀಮ್ , ಪಾನಿ ಪುರಿ , ಚಾಟ್ ಮಸಾಲ , ಪಿಜ್ಜಾ ಖಾವ್ನ್ ... ಚಂದ ಚಂದ ಡ್ರೆಸ್ ಘೇವ್ನ್ ದಿತ್ತಲೋ . ಬಂಧು ದೋಸ್ತಾನಿ ' ಕಾಯಿ ವಿಶೇಷ ಅಸ್ಸಕೀ ? ' ಮೋಣು ನಿಂಗೂಚಾ ಶುರು ಕೆಲ್ಲೆ . ಎಕ್ಲೆಲೆ ತೊಂಡ ಅನ್ನೆಕ್ಲೆ ಪೊಳೊನ್ ಹಸ್ತಾ ಅಶಿಲೀಂತಿ . ವ್ಹರ್ಡಿಕಾ ಜಾವ್ನ್ ' ಲಿವ್ ಇನ್ ರಿಲೇಷನ್ ' ರೀತ್ಯೇರಿ .
ಯೇಕ್ ದಿವಸು ಸಂಜೆ ಸಮುದ್ರಾ ಬದಿನ
ಬಯಿಸೂನ್ ಅಶಿಲೆ ವೆಳ್ಯೇರಿ .. " ಅರುಣ್ ! ತುಗ್ಗೆಲ್ ಯೆಕು ವಿಷಯು ಸಂಘುಕಾ ಮೋಣು ಲೆಕ್ಕಿಲೆ ... ಕಶಿ ಸಂಘಚೆ ಮೋಣು ಕಳ್ನಾ ... "
" ಸಾಂಘ ಅಧಿತಿ ... ಸಾಂಘ ... ಹಾಂವ ಅಯಿಕತಾ "
" ಹಾಂಗಾ ನಕ್ಕಾ ಘರಾ ಪಾವ್ತಾರಿ ಉಡ್ ಘಾಸು ಕರಿ "
" ಹುಂ " ... " ಅತ್ತ ಸಾಂಘ ... ಘರಾ ಪಾವ್ಲಿ ನವೆ ... "
" ಅರುಣ್ ಮಕ್ಕಾ ... ಮಕ್ಕಾ ವ್ಹರ್ಡಿಕ ಜಾವ್ಚೆ ಫುಡೇ ಎಕ್ಲೊ ಬಾಯ್ ಫ್ರೆಂಡ್
ಅಶಿಲೋ "
" ವಯ್ .. ! ತಾಗೆಲ್ ನಾ೦ವ ಸಂತೋಷ್ ... ಏಕ್ ವರ್ಸ ತಾಯ್ ತುಮ್ಮಿ ವೊಟ್ಟು ಜಾವ್ನ್ ಭೊಂವ್ಲೀತಿ .. ಮಾಗಿರಿ ತೊ ತುಕ್ಕಾ ಸೋಣು ಚಮ್ಕಾಲೋ .."
" ಹ್ಯೇ ವಿಷಯು ತುಕ್ಕಾ ಕಾಶಿ ಕಳ್ಳೇ .. ? "
" ತುಗ್ಗೆಲ್ ಅಮ್ಮಾನ್ ಸಂಘಿಲೆ ವ್ಹರ್ಡಿಕೆ ಫುಡೇ ಚಿ " .... ಅಧಿತಿಲೆ
ದೊಳೆ೦ತ್ ಪಳಕ್ಕನಿ ಉದ್ದಾಕ ಅಯಿಲೆ . ವ್ಹರ್ಡಿಕಾ ಜಾವ್ನು ಇತ್ಲೆ ದಿವಸು ಝಲ್ಲೆ .. ! ಯೇಕ್
ದಿವಸು ಅರುಣಾ ನ ನಿಮಗಿನಿ ... ಮಕ್ಕ ಕಳ್ ನಾಶಿ ಅಮ್ಮಾನ ಅರುಣಾ ಲಗ್ಗಿ ಸಂಘಲಾ .. ಅರುಣಾ ಲೇ
ಸಾಂಗ್ಲಾ ಮೋಣು ಅಮ್ಮಾನಯ್ ಮಕ್ಕಾ ಸಂಘನಿ . ಕಸಲೆ ವಿಚಿತ್ರ ಅಬ್ಬಾ !
" ಮಕ್ಕಾ ... ತುಗ್ಗೆಲ್ ಚರಿತ್ರ ನಕ್ಕಾ .. ಅಧಿತಿ ! ಕಿತ್ಯಾ ಗೊತ್ತಸ್ಸವೆ ? ಹಾಂವ ತುಕ್ಕ
ಸಾನಾಸ್ತಾನಾ ದುಕೂನ್ ಪ್ರೀತಿ ಕರ್ತಾಶಿಲೋ . ತುಗೆಲೊ ಆನು ವೆಂಕಟ್ರಾಯ್ ಮಾಸ್ಟ್ರು ಆನಿ ಮಿಗ್ಗೆಲೆ ಆನು ಮಸ್ತ ದೋಸ್ತ . ಸಾನಸ್ತನ ದುಕೂನ್ ಅಮ್ಮಿ ವೊಟ್ಟು ಖೆಳ್ಚ್ಯೆ
ಅಶಿಲೆ . ಟ್ರಾನ್ಸ್ಫರ್ ಜಾವ್ನ್ ವತ್ತರಿ ತುಗೇ ಲಿ ಫ್ಯಾಮಿಲಿ ಖಂಚೆ ಗಾವಾ೦ತ ಆಸ್ಸತಿ ಮೋಣು
ಕಳ್ನಿ . ಮಿಗೆಲೆ ಅಮ್ಮಾ ಲಗ್ಗಿ ... ಮನಾ ಅಶಿಲಿ ಅಧಿತಿ ವಿಷಯು ಸಾಂಗ್ಲೆ ... ಆಮ್ಗೆಲಿ
ವ್ಹರ್ಡಿಕಾ ಝಲ್ಲಿ .. ! ಅರುಣಾಲೆ ಉತ್ತರಂ ಅಯಿಕುನ್ ಅಧಿತಿ ಕರ್ಗುನ್ ಉದ್ದಾಕ ಶೀ ಝಲ್ಲಿ . ಧರಾಂಧರಿ ದೋಳೆ ಉದ್ದಾಕ ಆಯಿಲೆ ... ಕೊಸೊಳ್ನ್ ಆಯ್ಯಿಲೆ ನ೦ಯೀ ಶೀ ಧಾವ್ನ್ ಯೆವ್ನ್ ಅರುಣಾಕ ಗಳೇರಿ
ಪಳ್ಳಿ . ದೊಳೆ ಉದ್ದಾ ಕ ಪುಸುನ್ , ಗಾಲು ಧೋರ್ನ್ ಉಬ್ಬಾರ್ಲೊ ... ಆಜಿ ಅಧಿತಿ ಅನಿಕಯ್ ಚಂದಿ ದಿಸ್ಲಿ ಅರುಣಾಕ .
ಉಮಾಪತಿ
No comments:
Post a Comment