MAHABHARATHA PART - 48 ( Konkani Bhashentu )
DONNI DIVASACHYE ANI THINNI DIVASAA YUDHDHA
ದೊನ್ನಿ ದಿವಸಾಚ್ಯೇ ಆನಿ ತಿನ್ನಿ ದಿವಸಾ ಯುದ್ಧ
ಸೂರ್ಯದಯ ವೆಳ್ಯೇರಿ ದೊನ್ನಿ ದಿವಸಾ ಯುದ್ಧ ಆರಂಭ ಜಲ್ಲೆ . ಪಾಂಡವಾನಿ ಕ್ರೌ೦ಚ ವ್ಯೂಹ ಯುದ್ಧ ನಿರ್ಮಾಣ ಕೆಲ್ಲೆ . ಪಾಂಡವಾಂಗೆಲೆ ವ್ಯೂಹ ಬೇಧ ಕೊರುಂಕ ಭೀಷ್ಮಾನ ತ್ರಿಶೂಲ ವ್ಯೂಹ ರಚನಾ ಕೆಲ್ಲಿ . ಪಾಂಡವಾಂಗೆಲೆ ವ್ಯೂಹ ಯೆದ್ರಾಕ ಕೃಷ್ಣಾರ್ಜುನ ರಥ ರಾಬಲೆ . ಜಲ್ಲೇರಿ ಕೌರವ ವ್ಯೂಹ ಯೆದ್ರಾಕ ಭೀಷ್ಮ ,ರಕ್ಷೆ ಕ ರಾಬ್ಲೊ . ಸುರ್ವೆ ದಿವಸಾ ಯುದ್ಧಾ೦ತು ಪಾಂಡವಾಂಕ ನಷ್ಟ ಝಲ್ಲೆಲೆ . ಯುದ್ಧ ಆರಂಭ ಝತ್ತಾನಾ ಭೀಷ್ಮ ಅನಿ ಅರ್ಜುನ , ತೂ ... ಕೀ ...! ಹಾಂವ .. ಮ್ಹಳ್ಳೆ ಮ್ಹಣ್ಕೆ ಯುದ್ಧ ಕೆಲ್ಲೆ . ದೊಗ್ಗ ಜನಾಂಕ ಸರ್ವ ದಿವ್ಯಾಸ್ತ್ರ ಗೊತ್ತಶಿಲೆ ...! ಅರ್ಜುನ್ ಭೀಷ್ಮಾ ಯೆದ್ರಾಕ ಯೇವ್ನ್ ಯುದ್ಧಾ ಕ ರಬ್ಬಿಲೇ ಕಸಲೆ ಮ್ಹಳ್ಳೆರಿ ... ಪಾಂಡವ ಸೈನ್ಯಾ ಭಿತರಿ ಭೀಷ್ಮ ರಿಗ್ಲೊ ಝಲ್ಲೇರಿ ... ಅಪಾರ ಸೈನ್ಯಾಕ ನಾಶ ಕರ್ತಾಲೊ ... ಭೀಷ್ಮಾನ ಧಾಹ್ .. ಧಾಹ್ ಹಜಾರ ಸೈನ್ಯಾ ಕ ದಿವಿಶಿ ಮಾರ್ತಾ ಮೋಣು ಧುರ್ಯೋಧನಾ ಕ ವಚನ ದಿಲ್ಲಾ .. ವಚನ ದಿಲ್ಲೆ ಮ್ಹಣ್ಕೆ ಸುರ್ವೆ ದಿವಸಾ ಯುದ್ಧಾ೦ತುಚಿ ಧಾಹ್ ಹಜಾರ ಸೈನ್ಯಾ ಕ ದಿವಿಶಿ ಮಾರ್ಲಾ . ಭೀಮ ಸೇನಾ ನ ಕಳಿಂಗ ಸೈನ್ಯಾ ವೊಟ್ಟು ಯುದ್ಧ ಕೊರ್ನ್ ...ಸೈನ್ಯ ನಾವ ನಾತ್ಲೆ ಮ್ಹಣ್ಕೆ ಕೆಲ್ಲೆ . ಧುರ್ಯೋಧನಾಲೆ ಪೂತು ಲಕ್ಷ್ಮಣಾನ ಅಭಿಮನ್ಯು ವೊಟ್ಟು ಯುದ್ಧ ಶುರು ಕೆಲ್ಲೆ . ಅಭಿಮನ್ಯು ನ ಲಕ್ಷ್ಮಣಾಲೆ ಖಡ್ಘ ಕುಡ್ಕೊ ಕೊರ್ನ್ ಧನುಷ್ಯ ಮೋಣು ಘಲ್ಲೆ . ಲಕ್ಷ್ಮಣಾ ಲೆ ದುಸ್ತಿಥಿ ಪೊಳೊನ್ ... ಧುರ್ಯೋಧನ್ ತಾಗೆಲ್ ಸೈನ್ಯ ಘೇವ್ನ್ , ಲಕ್ಷ್ಮಣಾಲೆ ರಕ್ಷೆ ಕ ಅಯಿಲೊ . ದುರ್ಯೋಧನಾ ನ ಆಯ್ಯಿಲೆ ನಿಮಿತ್ಯ .. ಲಕ್ಷ್ಮಣಾಕ ಜೀವು ಆಯಿಲೆ ಮ್ಹಣ್ಕ್ ಝಲ್ಲೆ . ಬಪ್ಪುಸು , ಪೂತು ವೊಟ್ಟು ಝಾವ್ನ್ ... ಪಾಂಡವ ಸೈನ್ಯಾಕ ನಾಶ ಕೋರು ಶುರು ಕೆಲ್ಲೆ . ಹ್ಯೇ .. ಪೋಳಯಿಲೆ ಕೃಷ್ಣಾ ನ ರಥು ಅಭಿಮನ್ಯು ಲಗ್ಗಿ ಹಳ್ಳೆ . ಅಭಿಮನ್ಯು ಅನಿ ಅರ್ಜುನ ಮೇಳ್ನ್ ಕೌರವ ಸೈನ್ಯಾಕ ಧ್ವ೦ವ್ಸ ಕೊರುಂಕ ಆರಂಭ ಕೆಲ್ಲೆ . ಥೊಡೆ ಕೌರವ ಯೋಧ ರಥು ಸೋಣು ಧಾಂವ್ನ್ ಗೆಲ್ಲೆ . ಥೋಡೆ ಕುರು ಸೈನ್ಯ ಕುರು ಕ್ಷೇತ್ರ ಯುದ್ಧ ಭೂಮಿ ಸೋಣು ಧಾಂವ್ನ್ ಗೆಲ್ಲೆ . ಧುರ್ಯೋಧನ , ದುಃಶ್ಶಾಸನ ನಿ ಸೈನ್ಯಾಕ ಉತ್ತೇಜನ ಕೊರ್ನ್ ಯುದ್ಧ ರಂಗಾಂತು ರಾಬ್ಚೆ ತಶಿ ಕೆಲ್ಲೆ . ಅರ್ಜುನ ಅಭಿಮನ್ಯು ಜೋಡಿನ ಸುಮಾರ ವೀಸ ಹಜಾರ ಸೈನ್ಯಾಕ ನಾಶ ಕೆಲ್ಲೆ . ಸುರ್ವೆ ದಿವಸು ಕೌರವಾ೦ಗೆಲೇ ವಿಜಯ ಜಾವ್ನ್ ಅಸ್ಲೆರಿ ... ದೊನ್ನಿ ದಿವಸಾ ಯುದ್ಧಾ೦ತ್ ಪಾಂಡವಾಂಕ ಜಯ ಝಲ್ಲೆ . ಧುರ್ಯೋಧನಾಲೆ ಮನಾ ಕ ಸಮಾಧಾನ ನಾ ... ಹಜಾರ ಪೋಟಿ ಕರ್ಣಾ ಉಡ್ಘಾಸು ಅಯಿಲೊ ... ಸೂರ್ಯಾಸ್ತ ಕೆದನಾ ಝತ್ತಲೇ ಮೋಣು ರಕ್ಕುನ್ ಬೋಸ್ಲೆ ವ್ಹರಿ ಝಲ್ಲೆ . ಸೂರ್ಯಾಸ್ತ ವೇಳು ಝಲ್ಲೋ ... ರಣಭೇರಿ ಮೊಳ್ಗಲಿ ... ಯುದ್ಧ ತ್ಯೆ ದಿವಸು ರಾಬಲೆ .
ತಿನ್ನಿ ದಿವಸಾ ಯುದ್ಧ ... ಕೌರವಾನಿ ಗರುಡ ವ್ಯೂಹಾ ರಚನ ಕೆಲ್ಲೆ ... ಪಾಂಡವಾನಿ ಚಂದ್ರ ವ್ಯೂಹಾ ನಿರ್ಮಾಣ ಕೆಲ್ಲಿ ... ಅಭಿಮನ್ಯು ಸಾತ್ಯಕಿ ವೊಟ್ಟು ಮೆಳ್ನ್ ಕೌರವ ಸೈನ್ಯಾ ಕ ನಾಶ ಕೊರುಂಕ ಶುರು ಕೆಲ್ಲೆ ... ಆನ್ನೇಕ ಬದೀನ ಅರ್ಜುನಾ ನ ಸೈನ್ಯಾ ವೈರಿ ದಿವ್ಯಾಸ್ತ್ರ ಪ್ರಯೋಗ ಕೆಲ್ಲೆ . ಧರ್ಮಜ , ಭೀಮ , ದ್ರಷ್ಟದ್ಯುಮ್ನ ನ ಕೌರವ ಸೈನ್ಯಾ ಮಧ್ಯ ಢೀ ಮಾರ್ಲೆ . ಚಂದ್ರ ವ್ಯೂಹಾ ನಿಮಿತ್ಯ , ತೀನಿ ಕಡೆನ್ ದುಕೂನ್ ದಿವ್ಯಾಸ್ತ್ರ ಮಾರ್ನ್ ಧೂಳೀ ಮಯ ಕೆಲ್ಲೆ . ಹಸ್ತಿ ಘೋಡೆ ಭೀವ್ನ್ ಚೆಲ್ಲಾ - ಪಿಲ್ಲಿ ಜಾವ್ನ್ ಮೋ ರ್ನ್ ಪೊಳ್ಳೇ ಥೊಡೆ ಅಶ್ವ ಸೈನ್ಯ ಧಾವ್ನ್ ಗೆಲ್ಲೆ . ಪಾಂಡವ ಸೈನಿಕಾನಿ ಹಸ್ತೇ ಸೈನ್ಯಾಕ ಮಾಕ್ಷಿ ದುಕೂನ್ ಭಿವೊನ್ ಧಾವ್ನ್ ವೊಚ್ಚೆ ತಶಿ ಕೆಲ್ಲೆ . ತಂಗೆಲೆ ಸೈನ್ಯಾ ವೈರಿ ತಂಗೆಲೆ ಹಸ್ತಿಯಾಂಕ ಛೂ ಸೋಣು ಸೈನ್ಯಾ ಲಯ ಕೊರ್ನ್ ಘಲ್ಲೆ . ಕೌರವಾ೦ಗೆಲೆ ಹಸ್ತ್ಯಾನಿ ತಾಂಗೆಲೇ ಸೈನ್ಯಾ ವೈರಿ ಫೋಣು ಮಸ್ತುನ್ ನಾಶ ಕೊರುಂಕ ಶುರು ಕೆಲ್ಲೆ . ಭೀಷ್ಮ , ದ್ರೋಣಾಕ ಕಸಲೆ ಕೊರ್ಚೆ ಮೋಣು ಕಳ್ನಾಶಿ ದಿಗ್ಭ್ರಾ೦ತ ಝಲ್ಲೆ . ಧುರ್ಯೋಧನು ಭೀಷ್ಮಾ ಲಗ್ಗಿ ಧಾವ್ನ್ ಅಯಿಲೊ..." ಭೀಷ್ಮ ಪಿತಾಮಹಾ ...! ಕಸಲೆ ಝತ್ತಾ ಅಸ್ಸ .. ? ತುಗೆಲಿ ಶಕ್ತಿ ... ಯುಕ್ತಿ ಖಂಯ್ ಗೆಲ್ಲೆ .. ? ಪೋಳಯಿಲ್ ವೇ ..! ಪಾಂಡವ ಆಮ್ಗೆಲೆ ಸೈನ್ಯಾಕ ಧೂಳಿ ಶೀ ಉಬ್ಬಯಿತಾತಿ ..! ಆಮ್ಗೆಲೆ ಸೈನ್ಯ ವಿಂಗಡ ವಾಟ ನಾಶಿ ಧಾಂವ್ನ್ ವತ್ತಾ ಆಸ್ಸತಿ . ಪಾಂಡವಾಂಗೆಲೆ ವೈಲೆ ಪ್ರೀತೀನ ತೂ೦ವೇ ... ಆಮ್ಗೆಲೆ ಸೈನ್ಯ ಉಪೇಕ್ಷ ಕೆಲ್ಲೇರಿ ... ಸರ್ವ ನಾಶ ಝತ್ತಾ ... ಪಿತಾಮಹಾ ..! ತೂ ಅಂಮ್ಕಾ ಅನ್ಯಾಯ ಕರ್ತವೆ .. ? ನಿಜಾವ್ನ್ ಸಾಂಗ್ತಾ .. ತೂ೦ವೆ ಕೋಪಾನ ದೊಳೆ ಸೊಳ್ಳೇರಿ ... ಪಾಂಡವ ಸೈನ್ಯ ಮಾತ್ರ ನಯ್ ... ತ್ಯೆ ಪಾಂಡವ ತಾಯ್ , ಲಾಸ್ಸುನ್ ಭಸ್ಮ ಝತ್ತಲೀ೦ತಿ .. " ಮ್ಹಳ್ಳಲೊ
ಭೀಷ್ಮ : " ಧುರ್ಯೋಧನಾ ..! ಹಾಂವೆ ತುಕ್ಕಾ ಸುರ್ವೆಕಚಿ ಸಂಗ್ಲಾ ... ಹಾಂವ ಖಂಚೆಯ್ ವೆಳ್ಯೇರಿ ... ಪಾಂಡವಾಂಕ ದಿವಿಶಿ ಮಾರ್ನಾ ... ತನ್ನಿ ಮಕ್ಕಾ ತುಗೆಲೇ ಮ್ಹಣ್ಕೆ ಪುತ್ರ ಸಮಾನ ... ನಾತ್ರಾ೦ಗೆಲೆ , ಪೊಣತ್ರಾ೦ಗೆಲೆ ಯುದ್ಧ ಕೌಶಲ ಪೊಳೋ ನ್ , ಸ್ವಲ್ಪ ವೇಳು ಮಕ್ಕಾಚಿ ಹಾಂವ ವಿಸರ್ಲೊ .. ! ಧುರ್ಯೋಧನಾ ..! ಪೋಳಯಿತಾ ರಾಬ .. ತುಗೆಲೆ ಅಜ್ಜಾ ಲೆ ಯುದ್ಧ ಪ್ರತಿಭಾ , ಕೌಶಲ ಕಸಲಿ ಮೊಣು ಪೊಳೆ ... ಯುದ್ಧಾ೦ತು ಹಾತ್ತಾ ಶಸ್ತ್ರ ಧರನಾ ... ಮೋಣು ಪ್ರತಿಜ್ಞಾ ಕೆಲ್ಲೆಲೆ ಕೃಷ್ಣಾ ಲೇ ಹತ್ತಾ೦ತು ಶಸ್ತ್ರ ಧೊರ್ಚೆ ತಶಿ ಕರ್ತಾ ಪೊಳೆ .. ಪಾಂಡವ ಸೈನ್ಯ ಚೆಲ್ಲಾ ಪಿಲ್ಲಿ ಕೋರ್ನು , ಸೈನ್ಯ ಧ್ವ೦ಮ್ಸ ಕರ್ತಾ ಪೊಳೆ ... ಯೋ ಮಿಗೆಲೆ ಮಕ್ಷಿ " ಮೀಶೆ ಘು೦ವ್ಡಾನ್ ಭೀಷ್ಮ ರಥಾರಿ ಮುಕಾರಿ ಗೆಲ್ಲೊ . ಧುರ್ಯೋಧನ ತಾಗೆಲ್ ಭಂವ್ಡಾ೦ಕ ಘೆವ್ನ್ ಮಾಕ್ಷಿ ಚಿ ಗೆಲ್ಲೊ . ಭೀಷ್ಮಾನ ಆಗ್ನೇಯಾಸ್ತ್ರ ಪ್ರಯೋಗ ಕೆಲ್ಲೊ ... ರಣ ಭುಂಯ್ತು , .... ಆಕಾಶ ದುಕೂನ್ ಅಗ್ನಿ ಜ್ವಾಲಾ ಸಕಲ ದೇವಲಿ . ಅಗ್ನಿ ಪರ್ವತಾ ದುಕೂನ್ ಅಗ್ನಿ ಜ್ವಾಲಾಮುಖಿ ಭಗ ಭಗ ನಿ ಉಡ್ಡುನ್ ರಣ ಭೂ೦ಯ್ಚೇರಿ ಸುತ್ತು ಪೊಳ್ಳೇ . ಭೀಷ್ಮ ಧನುಷ್ಯಾಠೇ೦ಕಾರಾ ಕ ಹಜಾರ್ ಹಜಾರ್ ಬಾಣ .. ದ್ವಿಗುಣ ಝತ್ತಾಚಿ ಪಾಂಡವ ಸೈನ್ಯ ನಾಶ ಕೊರ್ಚಾ ಲಾಗ್ಲೆ .ಪಾಂಡವ ಸೈನ್ಯ ಝುಮ್ಮೆನ್ , ಭೀವ್ನ್ ಧ್೦ವ್ಚ್ಯಾ ಶುರು ಕೆಲ್ಲೆ .
ಕುರುಕ್ಷೇತ್ರಾ೦ತ್ ಸೈನಿಕ ದಿಸ್ಸನಾತಿ . ಭೀಷ್ಮಾಲೆ ಆಕಾಶ ಬಾಣ ದಿಸ್ತಾತಿ ... ಹಾ .. ಹಾ ಕಾರು ಝಲ್ಲೋ . 'ಹಾ ಕೃಷ್ಣಾ ... ಹಾ ಅರ್ಜುನಾ' ಮೊಣು ರಕ್ಷೆಕ ಸೈನಿಕಾನಿ ಅಪ್ಪೋಚ್ಯಾ ಲಾಗ್ಲೆ . ಕೌರವ ಸೈನ್ಯ ಉಮೇದೇರಿ ಸೀಟಿ ಮಾರ್ಲಿ ... ಹುರ್ರೇ ... ಹುರ್ರೇ .. ಮೋಣು ಪಾಂಡವ ಸೈನ್ಯಾ ಕ ಧಾಂವ್ಡಾನ್ ಗೆಲ್ಲೆಂತಿ . ಯುದ್ಧ ಕ್ಷೇತ್ರಾ೦ತ್ ಕಟಾವು ಕೊರುಂಕ ಸಿದ್ಧ ಝಲ್ಲೆಲೆ ಕಬ್ಬು ಶೇ ರಬ್ಬಿಲೇ ಸೈನ್ಯ ... ಕೌರವ ಸೈನ್ಯಾ ಖಡಗಾ ಪ್ರಹಾರಾಕ ರುಂಡ ಉಬ್ಬುನ್ ... ದೇಹ ನೆಲಾರಿ ಪೋಡ್ಚೆ ಶೇ ನಾಶ ಝಲ್ಲೆಂತಿ . ರುದ್ರ ಪ್ರಚಂಡ ಭೀಷ್ಮಾಕ ಕೃಷ್ಣಾ ನ ಪೋಳಯಿಲೆ " ಪೊಳೈಲೆ ವೇ ಅರ್ಜುನಾ .. ಹೇ ಮಂಥಾರೋ ..ತುಗ್ಗೆಲ್ ಭೀಷ್ಮ್ ಪಿತಾಮಹಾಕ ? " ಮೋಣು ಸಂಘುನ್ ರಥ ಭೀಷ್ಮಾಲೆ ಯೆದ್ರಾ ಕ ವೋರ್ನ್ ರಬ್ಬಯಿಲೆ . " ಅರ್ಜುನಾ .. ! ಹಗೆಲೆ ಸೊಕ್ಕು ದೇವೊ೦ಕಾ ... ಸೋಣುಕ್ಕಾ ಹಕ್ಕಾ " ಮ್ಹಳ್ಳಲೊ ಕೃಷ್ಣು . ಅರ್ಜುನಾನ ಭೀಷ್ಮಾಕ ಪೋಳಯಿಲೆ ...! ಸಾಕ್ಷಾತ್ ಪ್ರಚಂಡ ಪರಮೇಶ್ವರ್ ಸೋ .. ದಿಸ್ಲೊ . ಸೊಕ್ಕು ಲಗ್ಗಿಲೆ ಸಿಂಹಾ ಮ್ಹಣ್ಕೆ ಸಿಂಹ ಘರ್ಜನ ಕೆಲ್ಲಿ . ಅರ್ಜುನಾ ನ ಏಕ ಬಾಣ ಮಾರ್ನ್ .. ಹತ್ತಾ೦ತ ಅಶಿಲೆ ಧನುಷ್ಯ ಮೋಣು ಘಲ್ಲೆ . ಭೀಷ್ಮಾನ ಆನ್ನೇಕ ಧನುಷ್ಯ ಕಾಣು ಹಜಾರ ಬಾಣ ಸೊಳ್ಳೆ ... ಅರ್ಜುನಾನ ತೇ ದಿವ್ಯಾಸ್ತ್ರಾ ಕ ಸಮ್ಮ್ ಜಾಲ್ಲೆಲೆ ಬಾಣ ಸೋಣು ತಗೆಲೆ ಬಾಣ ಅರ್ಧ ವಾಟ್ಟೇರಿ ಚಿ ಕತ್ತೋರ್ನ ನಾಶ ಕೆಲ್ಲೆ . " ಅರ್ಜುನಾ .. ! ಹೇ ಮಂಥಾರೆಲೆ ಸೊಕ್ಕು ದೇವಯಿ ." ಮೋಣು ಕೃಷ್ಣಾ ನ ಸಂಗಚೆ ಭಿತರಿ .. ಭೀಷ್ಮಾನ ದಿಗ್ಬಂಧನಾಸ್ತ್ರಕೃಷ್ಣಾ ವೈರಿ ಸೊಳ್ಳೆ . ಕೃಷ್ಣ , ದಿಗ್ಬಂಧನಾಸ್ಟ್ರಾಕ ವಶ ಜಾವ್ನ್ ಬೋಂಬೆ ಸೊ ಝಲ್ಲೊ . ಅರ್ಜುನ ಏಕ ಪೊಟಿ ಭಿಲ್ಲೋ .." ಕೃಷ್ಣಾ ... ಕೃಷ್ಣಾ " ಮೋಣು ಆಪ್ಪ ಯಿಲೆ ಅರ್ಜುನಾ ನ . ಉತ್ತರ ನಾ .. ಸ್ವಲ್ಪ್ ವೇಳಾನಿ ಕೃಷ್ಣ ದಿಗ್ಬಂಧನಾಸ್ತ್ರ ಶಕ್ತಿ ದುಕುನ್ ಭಾಯಿರಿ ಅಯಿಲೊ . ಅರ್ಜುನ್ .. ಭೀಷ್ಮಾಲೆ ಯುದ್ಧ ಕೌಶಲ ಎದುರ ಥಂಢ ಝಲ್ಲೊ .. ಭೀಷ್ಮ ... ಮಾಕ್ಷಿ ... ಮಾಕ್ಷಿ ಬಾಣ ಸೊಡ್ತಾ ಅಸ್ಸ . ಅರ್ಜುನ , ಆಯ್ಯಿಲೆ ಬಾಣ ಕುಡಕೊ ಕೊರ್ನ್ ಪ್ರತಿ ಸ್ಪರ್ಧಾ ಕರ್ತಾ ಅಸ್ಸ . " ಅರ್ಜುನಾ ತೂ ಸಾರಥ್ಯ ಕರಿ " ಮ್ಹಳ್ಳಲೋ ಕೃಷ್ಣು . ಕೃಷ್ಣಾ ನ ಕಿತ್ಲೆ ಪ್ರೋತ್ಸಾಹ ಕೆಲ್ಲೇರಿಯಿ .. ಭೀಷ್ಮಾಲೆ ಎದುರ , ಅರ್ಜುನ್ ಮೊವಾಳು ಝತ್ತಾ ಅಸ್ಸ .
ಕೃಷ್ಣ :" ಅರ್ಜುನಾ ..! ತೂ೦ವೇ ಹೇ ಯುದ್ಧಾಂತ್ ಪರಾಜಯ ಜಾವ್ಕಾ ಮೋಣು ನಿರ್ಧಾರ್ ಕೆಲ್ಲಾ ದಿಸ್ತಾ .. ! ತುಗ್ಗೆಲ್ ಎದ್ರಾಕ ರಬ್ಬಿಲೊ ತುಗೆಲೆ ಶತ್ರು ಮೋಣು ಲೇಕ .. ತೋ ತುಗ್ಗೆಲ್ ಪಿತಾಮಹ ಮೋಣು ಲೆಕ್ಕುನುಕ್ಕಾ ... ಹಾಂವ ತುಕ್ಕಾ ಪದೇ- ಪದೇ ಸಾಂಗ್ತಾ . ಹೇ ಸೇನಾನಿ ನ , ಹಜಾರ ಅತಿರಥ , ಮಹಾರಥಾ೦ಕ , ಲಕ್ಷ ಸೈನಿಕಾಂಕ ವಧ ಕೆಲ್ಲಾ . ತುಕ್ಕ ಖಬ್ಬರ್ ಅಸ್ಸ ಕೀ ..? ಹೇ ಯುದ್ಧಾ೦ತು , ತೂ .. ವೀರ ಗತಿ ಪ್ರಾಪ್ತ ಝಲ್ಲೆಲೆ ಸೈನಿಕಾಲೆ ... ಋಣಿ ಜಾವ್ನ್ ಅಸ್ಸ .. ಏಕ ಶತ್ರು ಜಾವ್ನ್ ಪೊಳೆ ... ಅಧರ್ಮ ಪಕ್ಷಾಂತ್ ರಬ್ಬುನ್ ಯುದ್ಧ ಕರ್ತಶಿಲೋ ಮನುಷು ... ಕೆದನಾಯ್ ಕ್ಷಮಾಕ ಯೋಗ್ಯ ನಯ್ . ಹೇ ಯುದ್ಧಾ೦ತು ... ಕೋಣ ಅಧರ್ಮ ಪಕ್ಷಾಂತು ರಬ್ಬುನ್ ಯುದ್ಧ ಕರ್ತಾ ಕೀ ತ್ಯೋ ತುಗೆಲೊ ಶತ್ರು ... ಮಾನವ ಸಮಾಜಾ ಶತ್ರು ... ತ್ಯೋ ಮಿಗೆಲೆ ಶತ್ರು . ಏಕತ್ ವೇಳಾ ತೂ ಗಂಗಾ ಪುತ್ರಾ ಕ ವಧಾ ಕೊರ್ನ್ , ತಾಂಗೆಲೆ ಋಣ ಚುಕ್ತಿ ಕರ್ನಾ ನಾತ್ಲೆರಿ ... ತಕ್ಕ ಹಾಂವ ವಧ ಕರ್ತಾ ...! ತುಕ್ಕ ಭೀಷ್ಮ ಪಿತಾಮಹ ಮೊಣು .. ಕುಟುಂಬೇ ಮಲಘಡೋ ಮೋಣು , ಮನಾಂತು ಆದರ , ಗೌರವ ಯೆತ್ತಾ ಅಸ್ಸ .. ಹ್ಯೇ ಯುದ್ಧ ರಂಗ .. ಹಾಂಗಾ ಬಂದುತ್ವ , ಆಪ್ಯಾಯತಾ , ನಮೃತಾಕ ಜಾಗೊ ನಾ ... ದಿವ್ಯಾಸ್ತ್ರ ಸೋಡಿ ." ಮ್ಹಳ್ಳಲೋ ಕೃಷ್ಣು .
ತೆದೊಳ್ ಭಿತರಿ ಭೀಷ್ಮಾಲೆ ಏಕ ಬಾಣ ಕೃಷ್ಣಾ ಲೆ ಹತ್ತಾ ಕ ಲಗ್ಗುನ್ , ಹತ್ತಾ೦ತು ಅಶಿಲಿ ಚಾಟಿ ಸಕಲ ಪೊಳ್ಳಿ . ಆನ್ನೇಕ ಬಾಣ ಹತ್ತ ಧರ್ಲೆಲೆ ರಥಾ ಲಗಾಮು ಕತ್ತರ್ಲೆ .. ಆನ್ನೇಕ ಬಾಣ ಕೃಷ್ಣಾಲೆ ಕಿರೀಟ ಉಬ್ಬಯಿಲೆ . ಕೃಷ್ಣಾ ಕ ಮಸ್ತ ಕೋಪು ಅಯಿಲೊ ... ನೀಡಲಾರಿ ಹೂಮೇ ರೇಖಾ ದೃಷ್ಠಿ ಪೊಳ್ಳಿ .. ಕೋಪಾನ ದೊಳೆ ತಂಬಡೆ ಝಲ್ಲೆ ... ಅಸ್ತ ಜಾವ್ಚೆ ಸೂರ್ಯ ಮ್ಹಣ್ಕೆ ದಿಸ್ಲೆ ಕೃಷ್ಣಾ ಲೆ ದೋಳೆ . ನೀಡಲಾರಿ ಆಯ್ಯಿಲೆ ಹೂಮೇ ರೇಖಾ ... ಸಮುದ್ರಾ ಪಾಳ ಶೇ ದಿಸ್ಲೆ ಭೀಷ್ಮಾಕ . " ಹೇ ಭೀಷ್ಮಾ ...! ತುಕ್ಕಾ ಹಾಂವಚಿ ಸಂಹಾರು ಕರ್ತಾ ... ರಾಬ ... ರಾಬ ... ರಬ್ಬಾಯಿ ..." ಮೋಣು ರಥಾರಿ ದುಕುನ್ ಸಕಲ ಉಡ್ಲೊ . ಏಕ ಮೊಳ್ಳೆಲೆ ರಥಾ ಚಕ್ರ ಘೆವ್ನ್ ಭೀಷ್ಮಾ ದಿಕಾನ ಚ೦ಮ್ಕಲೊ . ಕೃಷ್ಣಾಲೆ ಹಾತ್ತಾಂತು ಅಶಿಲೆ ರಥ ಚಕ್ರ ... ಶ್ರೀ ಸುದರ್ಶನ ಚಕ್ರ ಮ್ಹಣ್ಕೆ ಘು೦ವ್ಚೆ ದಿಸ್ಲೆ ಭೀಷ್ಮಾಕ . ಕೃಷ್ಣಾ ನ ಏಕ ಏಕ ಹೆಜ್ಜ್ಯೋ ಘಾಲ್ನ್ ಮುಕಾರಿ ಯೆತ್ತ ನಾ ಭು೦ಯಿ ಕಾಂಪ್ಲಿ . ಕೋಪು ಆಯ್ಯಿಲೆ ಕೃಷ್ಣಾ ಲೇ ತೋಂಡ ಪೊಳೊನ್ ಭೀಷ್ಮು ಸಂತೋಷು ಪಾವಲೋ ..." ಪದ್ಮನಾಭಾ .. ಪರಂಧಾಮಾ ... ಅನಂತಾ ... ವಾಸುದೇವಾ ... ಕೃಷ್ಣಾ ... ತುಕ್ಕಾ ಕೋಪು ಹಡೋಚೆ ಸಾಧಾರಣ ವಿಷಯು ನಯ್ ... ಮಿಗೆಲಿ ಪ್ರತಿಜ್ಞಾ ಪೂರ್ತಿ ಕೊರುಂಕ ಹಾಂವ ಸಫಲ ಝಲ್ಲೋ ... ಮಕ್ಕ ಮುಕ್ತಿ ದೀ ... ಹಾಂವ ಇಚ್ಚಾ ಮರಣಿ .. ತುಗೆಲೆ ಸುದರ್ಶನ ಚಕ್ರಾ ಕ ಮಿಗೆಲೆ ಆತ್ಮ ಸಮರ್ಪಣಾ ಕರ್ತಾ ... ಹ್ಯೇ ಪತಿತ ಪಾವನಾ .. ಯೋಗೀಶ್ವರಾ .. ಯೋ .. ಮಕ್ಕ ಮುಕ್ತಿ ದೀ " ಭೀಷ್ಮಾ ನ ಮನಾಂತು ಲೆಕ್ಕುನ್ ಧನುಷ್ಯ ಸಕಲ ಘಾಲ್ಲೆ . ಅರ್ಜುನು ಕೃಷ್ಣಾ ಲೆ ಮಾಕ್ಷೀಚಿ ಧಾ೦ವ್ನ್ ಅಯಿಲೊ . ಕೃಷ್ಣಾ ಲೆ ಪಯ್ಯಾರಿ ಪೊಣು .." ಹ್ಯೇ ಕೃಷ್ಣಾ ... ಹ್ಯೇ ದಿವ್ಯ ರೂಪಾ ... ವಾಸುದೇವಾ ... ಭೀಷ್ಮ ಪಿತಾಮಹಾಕ ಕ್ಷಮ ಕರಿ . ತುಂವೇ ಯುದ್ಧಾ೦ತು ಆಯುಧ ಹಾತ್ತಾಂತು ಧರನಾ ಮೋಣು ಪ್ರತಿಜ್ಞಾ ಕೆಲ್ಲೆಲಿ ವಿಸರ್ಲೊ ವೇ ? ಕೃಷ್ಣಾ ಮಿಗೆಲಿ ನಿಮಿತ್ಯ ತುಗ್ಗೆಲ್ ಕೀರ್ತಿ ಕ ಕಳಂಕ ಯೆವ್ವು ನಜ್ಜ ... ಪರಂಧಾಮಾ .. ಶಾಂತ ಝಾ " ಮೋಣು ಮಾಗ್ಣೆ ಕೆಲ್ಲಿ ಅರ್ಜುನಾ ನ .
ಭೀಷ್ಮ :" ವಾಸುದೇವಾ ...! ಸ್ವಾಗತ ತುಕ್ಕಾ ... ಮಕ್ಕ ಮುಕ್ತಿ ದಿವ್ಚ್ಯಾಲೆಕ್ಕುನ್ ತೂ೦ವೇ ತುಗ್ಗೆಲ್ ಪ್ರತಿಜ್ಞಾ ವಿಸರ್ಲೊ .. ? ಹೇ ಗೋವಿಂದಾ .. ತು೦ವೆ ಸ್ವಯಂ ಮಕ್ಕ ಮಾರು೦ಕ ಯೇವ್ನ್ ಮಿಗೆಲೆ ಗೌರವ ತೀನಿ ಲೋಕಾಂತ್ ವಡ್ಡಯಿಲೆ . ಪೊಳೆ ವಾಸುದೇವಾ ...! ಮಿಗ್ಗೆಲೆ ಧನುಷ್ಯ ಅನಿ ಬಾಣ ಸಕಲ ಘಾಲ್ಲಾ . ಯುದ್ಧ ರಂಗಾಂತು ಮಿಗ್ಗೆಲೆ ಪ್ರಾಣ ಗೆಲ್ಲೆರಿ ತೀನಿ ಲೋಕಾಂತ್ ಮಿಗ್ಗೆಲೆ ಮಾನ ರಾಕ್ಲೆ ತೂ೦ವೇ . ಸುದರ್ಶನ ಚಕ್ರಾ ಕ ದೂತ ಕೊರ್ನ್ .. ಮಿಗ್ಗೆಲೆ ಮುಕ್ತಿಚೆ ಸಂದೇಷು ಪೆಟಯಿಲೆ ಹ್ಯೇ ಗಿರಿಧರ್ .. ! "
ಅರ್ಜುನ :" ಕೇಶವಾ ... ನಾ ಕೇಶವಾ ಮಕ್ಕ ಮಾಫಿ ಕರಿ ... ಕ್ಷಮಾ ಕರಿ ಪ್ರಭೋ .. ಹೇ ಗಿರಿಧರ್ ಗೋಪಾಲಾ .. ತೂ ಶಪಥ ಬದ್ಧ ಜಾವ್ನ್ ಅಸ್ಸ . ಹ್ಯೇ ಯುದ್ಧತಂತು ಶಸ್ತ್ರ ಹತ್ತಾ ಧರನಾ ಮೋಣು ಕೆಲ್ಲೆಲಿ ಪ್ರತಿಜ್ಞಾ ಉಡ್ಘಾಸು ಕರಿ ಕೇಶವಾ ..! ಏಕತ್ ವೆಳ್ಯೇರಿ ಶಸ್ತ್ರ ಉಬ್ಬಾರ್ಲೆರಿ .. ತುಗೇಲೆ ಭಕ್ತ ... ತುಗೆಲೆ ಮಿತ್ರ .. ತುಗ್ಗೆಲ್ ಸಖ ಕೋಣಾ ಕಯ್ ತೊಂಡ ದಕ್ಕೋಚ್ಯಾ ಜಾಯ್ನಾ ಕೇಶವಾ ... ಇತಿಹಾಸಕ ಹಾಂವ ತೊಂಡ ದಕ್ಕೋಚ್ಯಾ ಯೋಗ್ಯ ಅಸ್ಸ ನಾ ... ಹ್ಯೇ ಕೃಪಾಳು ..! ಮಕ್ಕಾ ಹ್ಯೇ ಕಳ೦ಕಾ ದುಕೂನ್ ವಿಮುಕ್ತಿ ಕರಿ . ಹಾಂವ ವಚನ ದಿತ್ತಾ ಪ್ರಭೋ .. ಅನಿ ಮಿಗೆಲೆ ಬಾಣ ಕೊಣಾಕಯ್ ವಂದನಾ ಕರ್ನಾ ಕೇಶವಾ ..ಶಾಂತ ಝಾ ಶಾಂತ ಶಾಂತ " ಕೃಷ್ಣಾ ನ ಸುದರ್ಶನ ಚಕ್ರ ಉಪಶಮನ ಕೆಲ್ಲೆ . ಭೀಷ್ಮಾ ದಿಕಾನ ಪೊಳೋನ್ ....
ಕೃಷ್ಣ :" ಗಂಗಾ ಪುತ್ರ ಭೀಷ್ಮ ..! ತುಗ್ಗೆಲ್ ಧನುಷ್ಯ ಉಬ್ಬಾರಿ " ಭೀಷ್ಮಾನ ಕೃಷ್ಣಾ ಕ ಪಾ೦ಯ್ ಪೋಣು ಧನುಷ್ಯ ಉಬ್ಬಾರ್ಲೆ . ಕೃಷ್ಣು ಅನಿ ಅರ್ಜುನ್ ರಥಾರಿ ಚಳ್ಳೆ೦ತಿ . ವಾಪಾಸ್ ಯುದ್ಧಾ ಕ ತಯ್ಯಾರ್ ಜಲ್ಲೆಂತಿ .
ಅರ್ಜುನ :" ಹೇ ಕಾಲೇಶ್ವರಾ ..! ಹ್ಯೇ ಸೂರ್ಯು ಆನಿ ಥೊಡೆ ವೆಳ್ಯ್ ನ ಅಸ್ಲೆರಿ ಹೇ ಯುದ್ಧ ಆಜಿಚ್ಯಿ ಸಮಾಪ್ತ ಕರ್ತಾ "
ಕೃಷ್ಣ : ಹೇ ಯುದ್ಧ ಮಾನವ ಸಮಾಜಾಚೆ ಕಲ್ಯಾಣಾ ಖತಿರಿ ಝತ್ತಾ ಅಸ್ಸ .. ಪಾರ್ಥಾ .. ! ಮಾನವ ಕಲ್ಯಾಣ ಸಮಾಜಾ ಪ್ರಕೃತಿ ನಿಯಮ ಕೆದ್ನಾಯ್ ಉಲ್ಲಂಘನ ಕರ್ನಾ ಪಾರ್ಥಾ . ತಶಿ ಜಾವ್ನ್ ಸೂರ್ಯ ತಾಗೆಲ್ ವೆಳೆರೀ ಚಿ ಉದಯ ಅನಿ ಅಸ್ತ ಜಾವ್ವೋ . ಪಾರ್ಥಾ ..! ತೂ .. ತುಗೆಲೆ ಧರ್ಮ ಪಾಲನ ಕರಿ . ಯುದ್ಧ ಕೊರ್ಚೆ ತುಗೆಲೆ ಹತ್ತಾ೦ತು ಅಸ್ಸ . ಝಲ್ಲೇರಿ ಯುದ್ಧ ಪರಿಣಾಮ ತುಗೆಲೆ ಹಾತ್ತಾಂತು ನಾ . ತಶಿ ಜಾವ್ನ್ ತೂ ಯುದ್ಧ ಕರಿ . ಯುದ್ಧ ಪರಿಣಾಮ ಮಿಗೆಲೆ ವೈರಿ ಸೋಡಿ . ಸೂರ್ಯಾ ದಿಕಾನ ಪೋಳೋನುಕ್ಕಾ ... ಯುದ್ಧ ಕರಿ "
ವಾಪಸ್ ಯುದ್ಧ ಆರಂಭ ಝಲ್ಲೆ . ಭೀಷ್ಮಾಯ ಲೇ ಹಾತ್ತಾಂತು ಅಶಿಲೆ ಧನುಷ್ಯ ತೀನಿ ಪೋಟಿ ಮೊಳ್ಳೆ . ಅರ್ಜುನಾಲೆ ಬಾಣ ರಬ್ಬನಾಶಿ ಮಾಕ್ಷಿ ಮಾಕ್ಷಿ ಯೇವ್ನ್ ಭೀಷ್ಮಾ ಕ ಘಾಯು ಕೆಲ್ಲೆ . ಸ್ವಲ್ಪ ವೇಳೇನ ಸೂರ್ಯಾಸ್ತ ಜಾವ್ಚೆ ಸೂಚನ ಶಿ ... ಶಂಖು , ತುತ್ತೂರಿ , ದುಂದುಭಿ ಮೊಳ್ಗಲಿ . ತಿನ್ನಿ ದಿವಸ ಯುದ್ಧ ರಾಬಲೆ . ತ್ಯೆ ದಿವಸು ರಾತ್ರಿ ... ಕೃಷ್ಣನ ಸಂಘಿಲ್ ತಶಿ೦ಚ್ಯಿ ... ದ್ರೌ ಪದಿ ಭೀಷ್ಮಾಲೆ ಶಿಬಿರಾ ಕ ವತ್ತಾ . ಭೀಷ್ಮಾಲೆ ಪಯ್ಯಾರಿ ಪೋ ಣು ವಂದನಾ ಕರ್ತಾ " ಅಖಂಡ ಸೌಭಾಗ್ಯವತಿ ಭವ " ಆಶೀರ್ವಾದು ಘೆತ್ತಾ . ಹ್ಯೋ ಆಶೀರ್ವಾದು ಭೀಷ್ಮಾನ ಆಲೋಚನಾ ಕೊರ್ಚೆ ತಶಿ ಝತ್ತಾ . ಮಿಗ್ಗೆಲೆ ಆಶೀರ್ವಾದಾ ಫಲ ಮೇಳ್ಕಾ ಜಲ್ಲೇರಿ ಹಾಂವೆ ಪ್ರಾಣ ತ್ಯಾಗ ಕೋರ್ಕಾ ಚಿ ಮ್ಹಳ್ಳೆಲೆ ಆಲೋಚನಾ ಭೀಷ್ಮಾ ಕ ಯೆತ್ತಾ . ಯುದ್ಧ ರಂಗಾಂತು ಸುದರ್ಶನ ಚಕ್ರ ಧಾರಿ ಕೃಷ್ಣಾ ನ ರಬ್ಬಿಲೆ ಚಿತ್ರ ... ಮನಾ ಯೆತ್ತಾ .....
ಉಮಾಪತಿ